ಮಳೆ ಹನಿಯ ಇನಿಯನಿಗೆ ………………

ಡಿಸೆಂಬರ್ 11, 2009 chitte


ಮಳೆ ಹನಿಯುತ್ತಿದೆ ಇನಿಯ ಇಳೆಗೆ ಘಮ್ಮೆನುತ್ತಿದೆ ಮಣ್ಣಿನ ಗಂಧ ಸೆಂಟ್ ಬಾಟಲಿಗಿಂತ ಸುಮಧುರವಾಗಿ, ಆದರೆ ನೀನಿಲ್ಲ, ನಿನ್ನ ಜೊತೆಗೆ ಕೂಡಿ ಕಳೆದು, ಗುಣಿಸಿ ಬಾಗಿಸಿದ ಸುಂದರ, ಸುಮಧುರ, ರೊಂಮಾಂಚನ ತನ್ಮಯತೆಯ ಜಾಡಿದೆ.!!! ಇದೆಲ್ಲವನ್ನು ಒಂದೊಂದಾಗಿ ನೆನೆಯುತ ಜಿಗಿಯುತಿಹೆನು ಮಳೆರಾಯನ ಜೊತೆ ಹಿತವಾಗಿ. ನಾನೇನ ಮಾಡಲಿ ದೊರೆ ಈ ಮಳೆರಾಯನಿಗೆ ನನ ಮೇಲೆ ವಿಪರೀತ ವ್ಯಮೋಹ ಅದಕ್ಕೆ ಅವನು ನಿ ನನ್ನನೊಡನಿರುವಾಗ ಬರುವುದಿಲ್ಲವಂತೆ. ನನ್ನ ಗೆಳತಿ ನನ್ನೊಡನೆ ಬೆರೆತು ಜಿಗಿದಾಡಲಿ ಎನ್ನುವುದು ಅವನಾಸೆ, ನನ್ನ ಪ್ರೇಯಸಿ ನನ್ನೊಡನೆ ಕಲೆತು ಮಳೆಹನಿಗೆ ಸಾಟಿಯಾಗಿ ನಾಚಿ ನೀರಾಗಿ ನನ್ನ ಎದೆಗೊರಗಲಿ ಎನ್ನುವುದು ನಿನ್ನಾಸೆ. ಇದರ ನಡುವೆ ನನ್ನಾಸೆ ಎಲ್ಲೊ ಕಳೆದು ಹೋಗಿದೆ ನನಗೂ ಆಸೆ ಇದೆ ದೊರೆ, ಸುಂದರ ತೋಟದಲಿ ಹೂಗಳ ನಡುವೆ ಮುತ್ತಿನ ಹನಿಗಳ ಜೊತೆಗೆ ಮನ ತಣಿಯುವಂತೆ ಕುಣಿದು ಕುಪ್ಪಳಿಸಿ ನಿನ್ನೆದೆಗೊರಗಿ ಕುಳಿತು ಆ ಮಧುರ ಕ್ಷಣಗಳ ಸವಿಯಲು. ತಾಳು ನಲ್ಲ ಅದಕ್ಕೆ ಹೊರಟಿರುವೆ ನನ್ನ ಸ್ನೇಹಿತನೊಡನೆ ಮಾತಾಡಲು, ನನ್ನ ಮನದ ಮಾತುಗಳನ್ನು ಬಿಡಿಸಿ ಹೇಳಿ ರಾಯಭಾರವ ಸಾಧಿಸಲು.

ಹೇ ಮಳೆರಾಯ ಪ್ಲೀಸ್ ಕಣೊ ನನ್ನ ಆಸೆಗೆ ಮಳೆಸುರಿಸೊ ನನ್ನ ಇನಿಯನ ನಿನಗೆ ಪರಿಚಯಿಸುವೆ ಅವನು ನಿನ್ನ ಅಭಿಮಾನಿಯೆ ಕಣೊ. ನಿನ್ನ ಗೆಳತಿಯ ಮನ ನೋಯಿಸಬೇಡ ನನ್ನಗೆ ಗೊತ್ತು ಕಣೊ ನೀನ್ ಆಗ್ ಮಾಡಲ್ಲ ಅಂತ ಥ್ಯಾಂಕ್ಸ್ ಮಳೆರಾಯ.

ಎನ್ ದೊರೆ ಕೋಪನ ನನ್ನ ರಾಯನ ಮೇಲೆ ಬೇಡಬಿಡು ಅವನು ಒಪ್ಕೊಂಡಿದ್ದಾನೆ ನನ್ನ ರಾಯಬಾರಕ್ಕೆ. ಹೌದು ಅವನಿಗು ಗೊತ್ತು ನಾವಿಬ್ರು ಎಂತ ಪ್ರೇಮಿಗಳೆಂದು . ಅದೆನ್ ಒಲವು ದೊರೆ ನಿನಗೆ ನಾನಂದ್ರೆ ಎಷ್ಟೊ ಸುಂದರಿಯರ ಬಿಟ್ಟು ಈ ಮೊಗ್ಗಿನ ಮನಸಿನ ಹುಡುಗಿಯ ಒಲವನ್ನು ಕದ್ದಿದ್ದೀಯ ಅಂದ್ರೆ ನಿನಗೊಂದು ಬೇಷ್ ದೊರೆ. ಅದು ಆಗಿರಲಿ ಈ ಸಾರಿ ಬರ್ತಿಯಲ್ಲ ಆವಾಗ ಒಂದು ಮೊಳೆ ಮಲ್ಲಿಗೆ ಹೂವನ್ನು ಕೈಯಲ್ಲಿ ಹಿಡ್ಕೊಂಡು ಬಂದು ನಿನ್ ಕೈಯಿಂದಾನೆ ನನ್ನ ತಲೆಗೆ ಮುಡಿಸು. ಈ ಮೊಗ್ಗಿನ ಹುಡುಗಿ, ಪಕ್ಕದಲ್ಲಿ ನೀನು, ಜೊತೆಗೆ ಮಲ್ಲಿಗೆಯ ಪರಿಮಳ, ಅದರ ಜೊತೆ ಮಳೆಹನಿಯ ತುಂತುರು, ಮಣ್ಣಿನ ಗಂಧ…..ಇದೆಲ್ಲದರ ಜೊತೆ ನಾ ಕಲೆತು ಕುಣಿಯಬೇಕು ಹಾಗೆ ಕುಣಿದು ನಿನ್ನ ಬಿಳ್ಕೊಡುವಾಗ ನಿನ್ನ ಹಣೆಗೊಂದು ಹೂಮುತ್ತು ಕೊಡಬೇಕಂತ ಇದೀನಿ ದೊರೆ,
ಸರಿ ಸರಿ ತಡವಾಯ್ತು ನಾನ್ ಹೂ ತೋಟದಲ್ಲಿ ಕಾಯ್ತಾ ಇರ್ತಿನಿ ನೀನ್ ಬೇಗ ಬಂದ್ಬಿಡು ದೊರೆ ….ಹೇ ಮಳೆರಾಯ ನಿನಗು ಹೇಳ್ತ ಇದೀನಿ ಕೇಳಿಸ್ತ…..

ಕಾಯ್ದಿರುವ ಮಳೆ ಮೊಗ್ಗಿನ ಹುಡುಗಿ

Entry Filed under: ಕಾಗದ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಡಿಸೆಂಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 1
2345678
9101112131415
16171819202122
23242526272829
3031  

ವಿಭಾಗಗಳು

ಪುಟಗಳು

 
%d bloggers like this: