ಇಷ್ಟ ಪಟ್ಟು ..ಕದ್ದ ಸಾಲುಗಳು ..

ಡಿಸೆಂಬರ್ 4, 2009 chitte

ಒಳದನಿಯ ಧಾಟಿಗೆ/ ನಿನ್ನೊಲವ ಬನಿ ಸಾಟಿಯಗಿ/ ಇನ್ನು ತಡೆಯಲಾಗದಂತೆ ನನ್ನ ಕವಿತೆ ಹುಟ್ಟಿತು/ ಇದು ಕವಿತೆ ಎಂದು/ ಈ ಕ್ಷಣದವರೆಗೆ ತಿಳಿದೇ ಇರದೆ/ ನಿನ್ನ ಸ್ವರ ಹುಟ್ಟಿಸಿದ ಹೊಸ ಕಂಪನಕ್ಕೆ/ ನನ್ನೊಳಗು ಕವಿತೆಯಾಗಿಬಿಟ್ಟಿತು.

ಗೊತ್ತಿಲ್ಲದೇ ಇರುವ/ ಎಷ್ಟೊಂದು ಸಂಗತಿಗಳಿವೆ/ ಸಾಮಾನ್ಯ ಙ್ಞಾನವಲ್ಲವಿದು/ ನನ್ನ ನಿನ್ನ ನಡುವಿನ/ ಲಯದ ಜ್ಞಾನ / ಮೌನಕ್ಕೆಲ್ಲ ಮಾತು/ ಬರೆಯಬಹುದಾಗಿದ್ದರೆ/ ಅಕ್ಷರ ಲೋಕದಲ್ಲಿ ಇನ್ನು ಹೀಗೆ ಸ್ಥಳ ಖಾಲಿಯಿರುತ್ತಿರಲಿಲ್ಲ.

ಆ ಹೆಣ್ಣಿನ ಕಣ್ಣುಗಳನ್ನು/ ಆಳವಾಗಿ/ ನೀನೊಮ್ಮೆ ದಿಟ್ಟಿಸಿದರೆ ಸಾಕು/ ನಿನಗೋಸುಗವೇ ಜೀವಿಸಿರುವ/ ಮುಡಿಪು ಕಾಣುತ್ತದೆ/ ಆದರೆ ನೀನು ಅದೊಂದು ಕಲಾಕೃತಿ ಎಂದು ಮಾತ್ರ/ ಕೊಂಡು/ ನಿನ್ನ ಹವ್ಯಾಸವ ತೋರಿಸಲು/ ಗೋಡೆಗೆ ಚೆಂದದಲ್ಲಿ ತೂಗು ಹಾಕಿರುವೆ.

ಇದರೊಳಗಿರುವುದೀಗ/ ಬರೀ ನಿನ್ನ ಹೆಸರ ಅಕ್ಷರಗಳಲ್ಲ/ ನನ್ನ ಪಾಲಿಗೆ/ ನಿನ್ನ ಇರುವಿಕೆಯನ್ನು ಪ್ರತಿಪಲಿಸುವ/ ಪ್ರಾಣದ ಕೊಂಡಿ.

ಬದುಕು ಪುಸ್ತಕದ ಹಾಗಂತೆ, ಸುಡೋದಕ್ಕೆ ಸೆಕೆಂಡ್ ಸಾಕು. ಬರೆಯೊದಕ್ಕೆ ವರ್ಷಗಳೇ ಬೇಕೇನೋ..!!!

Entry Filed under: ಸಂಗ್ರಹ

2 Comments Add your own

  • 1. ರಂಜಿತ್  |  ಡಿಸೆಂಬರ್ 4, 2009 ರಲ್ಲಿ 4:52 ಅಪರಾಹ್ನ

    ಎಲ್ಲಿಂದ ತೆಗೆದಿದ್ದು ಅಂತ ಹೇಳಿದ್ದರೆ ಚೆನ್ನಾಗಿತ್ತು..

    • 2. chitte  |  ಡಿಸೆಂಬರ್ 7, 2009 ರಲ್ಲಿ 9:13 ಫೂರ್ವಾಹ್ನ

      Ranjith avre idu VK Paper alli prakaTa agittu …


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಡಿಸೆಂಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 1
2345678
9101112131415
16171819202122
23242526272829
3031  

ವಿಭಾಗಗಳು

ಪುಟಗಳು