ನಗುತ ಬಾಳು ಜೀವವೇ ..

ಅಕ್ಟೋಬರ್ 28, 2009 chitte

world
ಯಾರು ಏನೇ ಅನ್ನಲಿ
ಯಾರೇ ಏನೇ ಜರಿಯಲಿ
ಯಾವ ಹೆಸರೇ ಕರಿಯಲಿ
ಸಹನೆಯೊಂದೆ ಗೆಲ್ಲಲಿ

ಅರ್ಥ ಬೇಕೇ ಬಾಳಿಗೆ ..?
ಯಾಕೆ ಅರ್ಥ ನಾಳೆಗೆ..?
ಅರ್ಥ ಒಂದೇ ಯಾಕೆ ಬೇಕು
ಅರಳಿ ನಗುವ ಜೀವಕೇ..

ಮನದಲ್ಲೆ ಹುಡುಗಿ ಕೂತ
ನಿನ್ನ ಹೇಗೆ ತಿಳಿಯಲಿ
ಕನಸ ಜೋಡಿಸುವವನ
ಹೇಗೆ ನಾನು ಕಾಣಲಿ..

ನಗುತ ಬಾಳು ಜೀವವೇ
ಕಹಿ-ಸಿಹಿಗಳ ದಾಳಿಗೆ
ಕಳೆದುಹೋದ ನಿನ್ನದೇ ಸಮಯ
ಸಿಗಬಹುದು ಮತ್ತೆ ನಾಳೆಗೆ

ಅವನು ನಾನು ತಾರತಮ್ಯ
ಅರಿವು ಬೆಳೆವ ತನಕ
ನೀರು ಹಾವಿಯಾಗಿ ಮೇಲೇರಿ
ಭುವಿಗೆ ಮಳೆ ಸುರಿವ ತನಕ

ತಾಳುವವರು ಗೆಲುವರು
ಗೆದ್ದು ಆಳದಿ ಇಳಿವರು
ಸೋಲು ಹತ್ತಿದ ಮೆಟ್ಟಿಲೇರಿ
ಬಾನಿನಲಿ ಹೊಳೆವರು

ಜಾಣ್ಮೆಯಿರಲಿ ಮಾತಲಿ
ಸೋತರೇನು ಈ ದಿನವ
ಗೆಲುವ ದಿನವ ಕಾಯಲಿ
ನಗುತ ಬಾಳು ಜೀವವೇ ..

Entry Filed under: ಕವಿತೆ...

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: