ಓ ಮರೆಯಲಾರದವನೇ ….

ಅಕ್ಟೋಬರ್ 17, 2009 chitte

lwtter

ಹೇಗಿದ್ದೀಯ ನೀ ಚೆನ್ನಾಗೆ ಇರ್ತಿಯ ಅಂತ ಗೊತ್ತು ಕಣೋ ಕುಶಲೋಪರಿಗೆ ಒಂದು ಮಾತು ಕೇಳಿದೆ . ನೀ ಏನಾದ್ರು ಈಗ ಈ ಪತ್ರ ಓದುತ್ತಿದ್ದರೆ ಸುಮ್ನೆ ಓದಬೇಡ ನನ್ನ ನಿನ್ನ ಕಂಗಳಲ್ಲಿ ಇಟ್ಕೊಂಡು ಓದು ಆಗ ನಾನು ನಿನಗೆ ಏನು ಅಂತ ಅರ್ಥವಾಗುತ್ತೆ .ಏನೋ ಗೊತ್ತಿಲ ಯಾರಿಗೂ ಸೋಲಬಾರದು ಅಂತ ಇದ್ದ ನನ್ನ ಹೃದಯ ನಿನಗೆ ಮಾತ್ರ ಸೋತಿತು . ಇಸ್ಟೊಂದು ಜನರ ನಡುವೆ ನಿನೊಬ್ಬ ಮಾತ್ರ ಹೇಗೆ ಬಂದೆ , ಏನ್ಮಾಡ್ಲಿ ನಾನು ಹೇಳು ನನ್ನನ್ನೇ ನಾ ಮರೆತು ಹೋಗಿದೀನಿ , ನಾನೆಸ್ಟು ಕಾಯ್ತಾ ಇದೀನಿ ಗೊತ್ತ ನಿನ್ನ ಆ ಒಂದು ಮಾತಿಗೆ . ಪ್ಲೀಸ್ ಕತ್ತಲಿನಲ್ಲಿರುವ ನಿಶ್ಯಬ್ದ ನಿನಾಗಬೇಡ , ಸಮಯಕ್ಕಾಗಿ ಕಾಯಬೇಡ , ಕಾಲವೆಂಬ ಸುಳಿಗಾಳಿ ಅದನ್ನು ಕಬಳಿಸಬಹುದು ಅದು ಕಬಳಿಸುವ ಮುನ್ನವೇ ನಾವೇ ಅದನ್ನ ಸಮಾಧಾನಪಡಿಸುವ .

ನಮ್ಮಿಬ್ಬರಲ್ಲಿ ಎಸ್ಟೋ ಮಾತುಗಳಿವೆ ಅ ಮಾತು ಮೌನದಲಿ ಕೊನೆಯಾಗಬಾರದು, ನಾ ಹೇಳಿದರೆ ನೀ ಅದನ್ನು ಸ್ವೀಕರಿಸುತ್ತಿಯೋ ??? ನಮ್ಮಿಬ್ಬರದು ಸ್ನೇಹ ಮಾತ್ರ ಅನ್ನುತ್ತಿಯೋ ಎನ್ನುವ ಭಯ ಅದಕ್ಕೆ ನಿನ್ನಿಂದಲೇ ಬರಲಿ ಆ ಒಂದನು ಮಾತು ಅಂತ ಸುಮ್ಮನಿದ್ದೇನೆ .

ಹೌದು ಕಣೋ ಹುಡುಗ ನಿಶ್ಯಬ್ದದಲ್ಲಿ ಕೂಡ ನಿನ್ನ ದ್ವನಿ ಕೇಳುತ್ತೆ ನನಗೆ ಪ್ರತಿ ಮಾತಿನ ಹಿಂದೆಯೂ , ಮೌನದ ಹಿಂದೆಯೂ , ನಾ ಪದಗಳ, ಪುಟಗಳ, ವಾಕ್ಯಗಳ ನಡುವೆಯೆಲ್ಲ ನಿನ್ನ ಸ್ಪರ್ಶದ ಸ್ಪೂರ್ತಿ ಇದೆ . ನನ್ನಲ್ಲಿ ಹೂತಿಟ್ಟ ಎಸ್ಟೋ ಕನಸುಗಳಿವೆ , ಮುಚ್ಚಿಟ್ಟ ಎಸ್ಟೋ ಮಾತುಗಳಿವೆ ಅವೆಲ್ಲವನ್ನೂ ಹೇಳಲು ಸಮುದ್ರಗಳನು , ಸಂಜೆಗಳನು ಸೇರಿಸಿ ನಿನ್ನ ಬಗ್ಗೆ ಯೋಚಿಸುತ್ತಾ ಕುಳಿತ್ತಿದ್ದೇನೆ , ಯಾವುದಾದರು ಬಿಳಿ ಮೋಡ ದಿಗಂತದೊಳಗೆ ಜಾರುತ್ತಿದ್ದರೆ ನಿನಗಾಗಿ ಒಬ್ಬಳು ಇನ್ನು ಇಲ್ಲೇ ಇದ್ದಾಳೆ ನಿನ್ನ ಆ ಒಂದು ಮಾತಿಗಾಗಿ ಕಾಯ್ದು ಕುಳಿತ್ತಿದ್ದಾಳೆ ಎಂದು ಕಳುಹಿಸುತ್ತೇನೆ .
ಈ ಪತ್ರ ಓದಿದ ನಂತರವಾದರೂ ನಿನಗೆ ನನ್ನ ಎದೆಯ ಬೇಗುದಿ ಅರ್ಥವಾಗಿ , ನನ್ನ ಹೃದಯದ ರಾಜನಾಗಿ , ನನ್ನ ಬಾಳ ಪಯಣದ ಜೊತೆಗೆ ಹೆಜ್ಜೆ ಹಾಕುತ್ತಿಯ ಅನ್ನುವ ನಂಬಿಕೆಯಲ್ಲಿ ಶತಮಾನಗಳ ಕನಸುಗಳನ್ನೊತ್ತಿ ಕಾಯುತ್ತಿದ್ದೇನೆ.
ಏನೋ ಹೇಳೋ ಬರ್ತಿಯಾ ತಾನೆ…? ಹೇಳ್ತಿಯ ತಾನೆ …..?

ನಾನೇ ಕಣೋ ನಿನ್ನ
ಋತು .

Entry Filed under: ಕಾಗದ

One Comment Add your own

  • 1. J.V.M.  |  ಜೂನ್ 1, 2010 ರಲ್ಲಿ 4:50 ಅಪರಾಹ್ನ

    WoW!……

    My dear friend , tumbaaaaaa chennagide ee patragalau…
    nijavaagiyu heluttiddene exlent naanu endu uhisiralilla neevu ishtu chennagi bareyuttirendu


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: