ಏನೆಂದು ಹೆಸರಿಡುವೆ….???

ಅಕ್ಟೋಬರ್ 17, 2009 chitte

You_don__t_have_to_be_alone_by_krme

ಪ್ರಶಾಂತ ರಾತ್ರಿಯಲಿ ನಿನ್ನ ನೆನಪು
ಬೇಡವೆಂದರೂ ಕಾಡುತ್ತಿದೆ ಕಾರಣವಿಲ್ಲದೆ
ಕಾರಣವಾದರು ಏತಕೆ ಬೇಕು ಆ ನಿನ್ನ ನೆನಪಿಗೆ
ಎಂದೆನ್ನುತ ಭಾವಸೆಲೆಗಳು ಬಂದಪ್ಪಳಿಸಿವೆ ನನ್ನೆದೆಗೆ

ಕಣ್ಣಲ್ಲೇ ಕಟ್ಟಿರುವೆ ಈಗಸ್ಟೆ ಕಂಡ ಹಾಗೆ
ಆನಂದದ ಮೃದು ಮಂದಹಾಸದ ಹಾಗೆ
ಮಾಸುತ್ತಿದೆ ಏನೇನೋ ಆದರೆ ನಿನ್ನ ಚಿತ್ರ ಮಾಸುತ್ತಿಲ್ಲ
ಉಳಿದುಕೊಂಡಿದೆ ಹಾಗೆ ನಾ ಬರೆವ ಕವಿತೆಯ ಹಾಗೆ

ಕುಳಿತ್ತಿದ್ದೇನೆ ನನ್ನ ಮನೆಯ ಹಿತ್ತಲಿನ ಕಲ್ಲುಹಂಚಿನ ಮೇಲೆ
ನಿನ್ನ ಪ್ರೀತಿಯ ನೆನಪಿನ ತಂಪು-ಕಂಪು ಹೊತ್ತು
ಸದ್ದಿಲ್ಲದೆ ಕಿವಿ ಸದ್ದಗಿದೆ ನಿನ್ನ ಕಿರು ಸಂದೇಶದ ಶಬ್ದಕ್ಕಾಗಿ
ಹಸಿರು ಗರಿಕೆಯ ತುದಿಗೆ ಆಕಳಿಸಿ ಕೂತ ಹಿಮದ ಹನಿಯ ಹಾಗೆ

ನಿನ್ನ ಜೊತೆ ಹೆಜ್ಜೆಯ ಪಯಣ ಎಷ್ಟು ದೂರವೋ..?
ಕಣ್ ಕತ್ತಲಿಟ್ಟು ಅಲ್ಲೆಲ್ಲೋ ಎಡವಿಬಿದ್ದು ಘಾಸಿಯಾಗುವುದೇನೋ
ಆದೇನೇಯಾಗಲಿ ಇಸ್ಟೆಲ್ಲಾ ಎಸ್ಟೆಲ್ಲಾ ದೂರವಾದರು ನಡೆವೆ..
ಮುಗಿಲ ಚುಂಬಿತ ಗಿರಿಯಂತ ನಿನ್ನ ಪ್ರೀತಿಯಿರುವಾಗ

ಇದ್ದಂತೆ ಇದ್ದಲ್ಲೇ ಜನ್ಮ ಕಳೆವೆ ಕಡೆಯವರೆಗೂ
ಪ್ರೀತಿಸುತ್ತಲೇ ನಿನ್ನ ಅನುಮಾನಿಸದೆ ಕ್ಷಣವು..
ಕಾರಣ ನನ್ನ ನಂತರ ಈ ನನ್ನ ಪ್ರೀತಿ
ನಿನ್ನೊಳಗೆ ಕವಿತೆಯಾಗಲಿ ಅವರಿವರಿಗೆ ಎಂದು

ನನ್ನೊಳಗೆ ನಿನ್ನೊಲವ ಸಸಿ ಬಾಡುವುದನ್ನು ತಡೆಯಲಾಗುತ್ತಿಲ್ಲ
ಅದೇಷ್ಟೋ ಅವಡುಗಚ್ಚಿದರೂ ಅಶ್ರುದಾರೆ ಹಸಿಯಾಗಿ ಹನಿದಿದೆ
ಇಷ್ಟು ನಿರ್ಧಯಿಯಾಗಬಾರದಿತ್ತು ನಿನ್ನ ಪ್ರತಿಕ್ರಿಯೆ ಇಲ್ಲದ ಮನಸ್ಸು
ಇಂಥಾ ಪ್ರೀತಿಗೆ ನಾನಾದರು ಏನೆಂದು ಹೆಸರಿಡಲಿ ಹೇಳು …???

Entry Filed under: ಕವಿತೆ...

2 Comments Add your own

  • 1. amritavarshini  |  ಡಿಸೆಂಬರ್ 14, 2009 ರಲ್ಲಿ 7:24 ಫೂರ್ವಾಹ್ನ

    ಒಂದು ಕ್ಷಣ ಬೇರೆಯದೇ ಲೋಕಕ್ಕೆ ಓದುಗರರನ್ನು ಒಯ್ಯುವ ಸಾಮರ್ಥ್ಯ ನಿಮ್ಮ ಬರವಣಿಗೆಗಿದೆ ಅಕ್ಕ…
    keep it up… 🙂

    • 2. chitte  |  ಡಿಸೆಂಬರ್ 15, 2009 ರಲ್ಲಿ 4:48 ಫೂರ್ವಾಹ್ನ

      howda!!!!! …. thank Q


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to comments via RSS Feed

ಅಕ್ಟೋಬರ್ 2009
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 123456
78910111213
14151617181920
21222324252627
28293031  

ವಿಭಾಗಗಳು

ಪುಟಗಳು

 
%d bloggers like this: