ಒಳದನಿಯ ಧಾಟಿಗೆ/ ನಿನ್ನೊಲವ ಬನಿ ಸಾಟಿಯಗಿ/ ಇನ್ನು ತಡೆಯಲಾಗದಂತೆ ನನ್ನ ಕವಿತೆ ಹುಟ್ಟಿತು/ ಇದು ಕವಿತೆ ಎಂದು/ ಈ ಕ್ಷಣದವರೆಗೆ ತಿಳಿದೇ ಇರದೆ/ ನಿನ್ನ ಸ್ವರ ಹುಟ್ಟಿಸಿದ ಹೊಸ ಕಂಪನಕ್ಕೆ/ ನನ್ನೊಳಗು ಕವಿತೆಯಾಗಿಬಿಟ್ಟಿತು. ಗೊತ್ತಿಲ್ಲದೇ ಇರುವ/ ಎಷ್ಟೊಂದು ಸಂಗತಿಗಳಿವೆ/ ಸಾಮಾನ್ಯ ಙ್ಞಾನವಲ್ಲವಿದು/ ನನ್ನ ನಿನ್ನ ನಡುವಿನ/ ಲಯದ ಜ್ಞಾನ / ಮೌನಕ್ಕೆಲ್ಲ ಮಾತು/ ಬರೆಯಬಹುದಾಗಿದ್ದರೆ/ ಅಕ್ಷರ ಲೋಕದಲ್ಲಿ ಇನ್ನು ಹೀಗೆ ಸ್ಥಳ ಖಾಲಿಯಿರುತ್ತಿರಲಿಲ್ಲ. ಆ ಹೆಣ್ಣಿನ ಕಣ್ಣುಗಳನ್ನು/ ಆಳವಾಗಿ/ ನೀನೊಮ್ಮೆ ದಿಟ್ಟಿಸಿದರೆ ಸಾಕು/ ನಿನಗೋಸುಗವೇ ಜೀವಿಸಿರುವ/ ಮುಡಿಪು [...]