Archive for the ‘ಚಿಕ್ಕ ಚುಕ್ಕೆಗಳು.’ Category

ಮನುಸ್ಯರನ್ನ ಮೇಲು-ಕೀಳು ಮಾಡುವ ಒಂದು ಪದ.

ನೆಮ್ಮದಿಯ ಹೊಸವರ್ಸ ನಮ್ಮದಾಗಬೇಕು ನಮ್ಮದಾಗಬೇಕಾದರೆ , ಈ ವರ್ಷವು ನಮ್ಮ ಕೈಯಲ್ಲಿರಬೇಕು ಈ ವರ್ಷ ಕೈಯಲ್ಲಿದ್ದರೆ , ಹೋದ ವರುಷದಲಿ ಗೆಲುವಿರಬೇಕು ಹೋದವರುಷದಲಿ ಗೆಲುವಿದ್ದರೆ, ಕಳೆದ ವರ್ಷವನು ಸೋತಿರಬೇಕು ಸೋಲೆ ತಾನೆ ಗೆಲುವಿನ ಗರಿ ! ಸೋತು ಗೆದ್ದ ದಿನವೆ ಹೊಸದು!!!!!!!! ಅದುವೆ ಹೊಸತು ಆಗಲೇ ನೆಮ್ಮದಿಯ ಹರ್ಷ ನಮ್ಮದು. .

ದೇವರು ಕಳುಹಿಸಿದ ಭುವಿಗೆ ನಿನ್ನನ್ನು ಅಂದು…! ಅದರ ಸಾರ್ಥ್ಹಕತೆಗೆ ನೀ ಏನು ಸಾಧಿಸಿದೆ ಇಂದು…!

ನಿನ್ನ ನಾ ಕಂಡ ಆ ಕ್ಷಣ, ನನ್ನನೇ ಮರೆತೆ ಆ ಒಂದು ಕ್ಷಣ. ನಿನ್ನ ಕಣ್ಣಲ್ಲಿ ನಾ ಬೆರೆವ ಆ ಕ್ಷಣ, ಹೃದಯ ತೇಲಾಡಿತು ಆನಂದದಿಂದ ಒಂದು ಕ್ಷಣ. ಜೀವನದಲಿ ನೀ ಬರುವ ಆ ಸುಂದರ ಕ್ಷಣ, ಬದುಕುವ ಆಶೆ ಹುಟ್ಟಿಸಿತು ನನಗೆ ಒಂದು ಕ್ಷಣ. ಎಲ್ಲವನು ನೆನೆಯಿತು ಮನ ಮರು ಕ್ಷಣ. ನನ್ನನೇ ನಾನೇ ಪ್ರಶ್ನಿಸಿ ಕೊಂಡೆ ತಕ್ಷಣ , ನನಗೆ ನಾನೇ ಹೊಸಬಳು ಅನಿಸಿತು ಒಂದು ಕ್ಷಣ!!!! …