ಮನದ ಮೌನ ಕಿಸಕ್ಕನೆ ನಕ್ಕಾಗ ಅಲ್ಲೊಂದು ಮಧುವಿನ ಪರಿಮಳ ಆಗ ರೆಕ್ಕೆಬಿಚ್ಚುತ್ತದೆ ಮಾತುಗಳು ಬಣ್ಣಬಣ್ಣದ ಚಿಟ್ಟೆಯಾಗಿ. ಕವಿ ಲೇಖನಿಯ ಶಾಯಿ ಮುಗಿದಾಗ ಅಲ್ಲಾಗ ಕಟ್ತಲೆಯ ಪರದಾಟ ಆಗ ಮಿನುಗುತ್ತದೆ ಕವಿತೆ ಹಿಡಿಯಲು ಆಗದ ಚಿಟ್ಟೆಯಾಗಿ. ರಾತ್ರಿಯ ಕನಸುಗಳಡಿಯಲ್ಲಿ ಮನ ಕುಣಿದಾಗ ನಸು ಬೆಳಕಿನಲ್ಲಿ ಮುಗಿಯದ ಮುಂಜಾವು ಆಗ ಸಂಭ್ರಮಿಸುತ್ತದೆ ದಿನ ಹೊಳೆಯುವ ಚಿಟ್ಟೆಯಾಗಿ . ಎಲ್ಲಿಂದಲೋ ಕೋಗಿಲೆ ಕುಹೂ ಎಂದಾಗ ಯಾರದೋ ಹೃದಯದಲಿ ಸರಿಗಮಗಳ ನರ್ತನ ಮನಸ್ಸಿನಲ್ಲಿ ಸಣ್ಣದೊಂದು ಕಲರವ ಅದಕೆ ದನಿಯಾಗುತ್ತದೆ ಉತ್ಸವದ ಚಿಟ್ಟೆಯಾಗಿ .
Archive for the ‘ಕವಿತೆ…’ Category
ರಾತ್ರಿ ಕಂಡ ಕನಸುಗಳಿಗೆಲ್ಲ ಮುಂಜಾವಿಲ್ಲ ಗೆಳೆಯ ಬಹುಶ: ತಿಳಿದಿರಬೇಕು ಇದು ನನಸಾಗಲಾರದೆಂದು ನನ್ನ ನಗುವಿನ ಸುತ್ತಲಿದ್ದ ಆಸೆಗಳೆಲ್ಲ ಕಮರಿದಂತೆ ನಿನ್ನ ಕಣ್ಣುಗಳು ಏನೇನೋ ಹೇಳುತಿರುವಂತೆ ಸದ್ದಾಗದ ಹೃದಯದಿ ಭಾವನೆಗಳ ತೋಡಿದಂತೆ ಅವನ ಆಯ್ಕೆಯ ಮುಂದೆ ಕನಸ ಹರಡಿದಂತೆ ಇದೆಲ್ಲವೂ ಮರೆತಂತೆಲ್ಲಾ ಮತ್ತೆ ಮತ್ತೆ ನೆನಪಾದಂತೆ ಇದೀಗ ತಾನೆ ರೂಪ ತಳೆದಿದೆ ಅಲ್ಲೊಂದು ಪಾಳುಮನೆ ಈ ಮುಂಚೆ ಅದೊಂದು ಸುಂದರ ಪ್ರೇಮಲೋಕ ಅಲ್ಲಲ್ಲಿ ಕಾಣಸಿಗವ ಹೆಜ್ಜೆ ಗುರುತುಗಳ ಮೆರವಣಿಗೆ ಲೆಕ್ಕವಿಲ್ಲದಸ್ಟು ಬರೆದ ಕಾಗದ ಬರವಣಿಗೆ ಇದೆಲ್ಲವೂ ಮರೆತಂತೆಲ್ಲಾ ಮತ್ತೆ [...]
ರೇಶಿಮೆ ಹುಳದಂತೆ ನನ್ನ ಪ್ರೀತಿ ನನ್ನ ಮನಸ್ಸಿನ ಸುತ್ತ ನಾನೇ ಕನಸಿನ ನೂಲು ಹೆಣೆದು ಬಿಟ್ಟು ಅದರಲ್ಲೆ ವಿಲ ವಿಲ ಹೊದ್ದಾಡಿ ಹೆಣವಾಗಿ ಕಣ್ಣೀರಿನಲಿ ತೋಯುತ್ತಿರವೆ ಪ್ರತಿಕ್ರಿಯಿಸಲಾರದ ನನ್ನ ಬಿಕ್ಕುವಿಕೆಗೆ ನಗುವುದೊಂದೆ ಗೊತ್ತು ನಿನಗೆ. ನವ ವಸಂತದಂತೆ ನನ್ನ ಪ್ರೀತಿ ಪಂಜರದ ಬಂಧನದಲ್ಲಿರುವ ಕೋಗಿಲೆ ಮೇಲೆ ಮೋಡ ಮುಸುಕಿದ ಮುಗಿಲು ಪ್ರೀತಿ ನೊಗವ ಹೆರಲಾರದ ಹೆಗಲು ಕೆಳಗೆ ಕಾಲು ಕಟ್ಟಿದ ನವಿಲು ಹರಿಯುವುದು ರಾಗಭಾವದ ಹೊನಲು ಇದ ನೋಡುವುದಷ್ಟೆ ಗೊತ್ತು ನಿನಗೆ. ಹೇಳಲು ಬಹಳ ಸುಲಭ ನನ್ನ [...]
ತಿಳಿ ಮನಸ್ಸಿನಾಳದಲ್ಲೊಂದು ಶಬ್ಧ ಸುರುಳಿ ಸುತ್ತುತ್ತಿದೆ ಮೂಕವಾಗಿ. ಟಪ್ಪನೆ ಬಿದ್ದ ರಭಸಕ್ಕೇನೋ, ಕಣ್ಣಿಗು ಕಾಣದಾಗಿದೆ ಅದರ ವೇದನೆ. ಮೊದಲೆಲ್ಲ ಹೀಗಿರಲಿಲ್ಲ ಸಾಮಾನ್ಯವಾಗಿ ಉಸಿರು ನಿಂತ ಮರವಾಗಿ. ಇದು ಕಂಡು ಕೇಳರಿಯದ ಸುದ್ದಿ ಚೆಲ್ಲಾಪಿಲ್ಲಿಯಾಗಿದ್ದು ಯಾರ ಮನವೋ…? ದೂರದಲ್ಲೆಲ್ಲೋ ನರಳಾಟ ಕನವರಿಸುತ್ತಿದೆ ಸ್ಮಶಾನದ ಮೂಲೆಮೂಲೆಗೂ ಹರಡಿ. ನಿನ್ನ ಮನೆ, ಮನ ದೂರವಿರಲಿ ನನಸಾಗದ ನನ್ನ ಕನಸಿನ ಸಮಾಧಿಯಿಂದ. ಒಳಗೆಲ್ಲೊ ಮುಚ್ಚಿಟ್ಟಿದ್ದ ಮೌನ ಎಲ್ಲೊ ಹರಿದು ಹೋಗುತ್ತಿರಬಹುದು, ಇಲ್ಲದ್ದು ಹಾಡಾಗಲೂಬಹುದು ಯಾಕೆಂದರೆ ನಾನು ಕವಿತೆ ನೀನದರ ಆತ್ಮ ಅಲ್ಲವೆ…?
ಮನಸ್ಸೆಂದರೆ,,,, ನೆನಪಿನ ಮಗ್ಗುಲಲಿ ಬೆಚ್ಚನೆಯ ಕಂಬಳಿಯ ಜೊತೆ ಮಲಗಿದ ಸುಪ್ತ ಬಯಕೆ. ಮನಸ್ಸೆಂದರೆ,,,,, ಮುಂಜಾವಿನ ಹರಿದ ಬೆಳಕಲಿ ಮುಗಿದ ಕನಸಿನ ಜೊತೆ ಜಿಗಿದಾಡುವ ಜಿಂಕೆ. ಮನಸ್ಸೆಂದರೆ,,,,, ಬರಯದ ಸಾಹಿತ್ಯದಲಿ ಕವಿಯ ಪದಗಳ ಜೊತೆ ಹರಿದಾಡುವ ಚಂಚಲತೆ. ಮನಸ್ಸೆಂದರೆ ಸೂರ್ಯನ ಕಿರಣದಲಿ ಮಳೆ ಹನಿಯ ಜೊತೆ ಮೆರೆದಾಡುವ ಕಾಮನಬಿಲ್ಲು. ಮನಸ್ಸೆಂದರೆ,,,,, ಸಂಗಾತಿಯ ಪಯಣದಲಿ ಬದುಕಿನುದ್ದಕ್ಕೂ ಇರುವೆ ಜೊತೆ ಎಂದು ಕೊಡುವ ಭರವಸೆ. ಮನಸ್ಸೆಂದರೆ,,,, ಹೀಗೂ.., ಇರಬಹುದಲ್ಲವೆ.???
ಕಾಲಿ ಕುಳಿತಂತೆ ನಾ ಇಲ್ಲ ಸಲ್ಲದ ವಿಚಾರಗಳು ಬೇತಾಳದಂತೆ ಕಾಡುತ್ತವೆ .. ಮನದಂಗಳದ ತುಂಬಾ… ಬರಿ ಮಾತಿನಲಿ ಎಂಥ ಬಣ್ಣಿಸಲಿ ಮುಂಜಾವಿನ ನಗುವ ಹೂವಂತೆ ಚೆಲ್ಲಾವೆ ಕನಸುಗಳು ಮನದಂಗಳದ ತುಂಬಾ… ಮೇಘರಾಗದ ತಂಪುಹನಿಯ ಮೌನಹಾಡು ಸದ್ದಿಲ್ಲದಂತೆ ಗುಣುಗುಡುತ್ತಿದೆ ಮನದಂಗಳದ ತುಂಬಾ… ತಂದನೋ ಗೆಳೆಯ ಸಂಧ್ಯರಾಣಿಯ ಸಮುದ್ರದ ಮುತ್ತಿನ ಸಹಿಯನ್ನು ಮನದಂಗಳದ ತುಂಬಾ… ಕನಸಿನ ಸೌಧ ಹಣೆದು ಭಾವನೆಗಳು ಮಿಡಿದು ಹೊಮ್ಮಿ ಮಿಸುಕಾಡುತ್ತಿವೆ ಮನದಂಗಳದ ತುಂಬಾ…. ಸಣ್ಣ ಹಠವ ಮಾಡಿದೆ ಎಲ್ಲೋ ಕಳೆದ ಹೃದಯವ ಹುಡುಕುತ ತನುವು ಮನದಂಗಳದ [...]
ಯಾರು ಏನೇ ಅನ್ನಲಿ ಯಾರೇ ಏನೇ ಜರಿಯಲಿ ಯಾವ ಹೆಸರೇ ಕರಿಯಲಿ ಸಹನೆಯೊಂದೆ ಗೆಲ್ಲಲಿ ಅರ್ಥ ಬೇಕೇ ಬಾಳಿಗೆ ..? ಯಾಕೆ ಅರ್ಥ ನಾಳೆಗೆ..? ಅರ್ಥ ಒಂದೇ ಯಾಕೆ ಬೇಕು ಅರಳಿ ನಗುವ ಜೀವಕೇ.. ಮನದಲ್ಲೆ ಹುಡುಗಿ ಕೂತ ನಿನ್ನ ಹೇಗೆ ತಿಳಿಯಲಿ ಕನಸ ಜೋಡಿಸುವವನ ಹೇಗೆ ನಾನು ಕಾಣಲಿ.. ನಗುತ ಬಾಳು ಜೀವವೇ ಕಹಿ-ಸಿಹಿಗಳ ದಾಳಿಗೆ ಕಳೆದುಹೋದ ನಿನ್ನದೇ ಸಮಯ ಸಿಗಬಹುದು ಮತ್ತೆ ನಾಳೆಗೆ ಅವನು ನಾನು ತಾರತಮ್ಯ ಅರಿವು ಬೆಳೆವ ತನಕ ನೀರು ಹಾವಿಯಾಗಿ [...]
ಓ ಗೆಳತಿ, ಏನೆಂದು ಬರೆಯಲಿ ನಾ ನಿನ್ನ ಕನಸು ನನಸಾಗಲಿ ಎಂದೆ, ಆ ನನಸೆಲ್ಲ ಸವಿಯಾಗಲಿ ಎಂದೆ.. ಏನೇ ಯಾಗಲಿ ಬದುಕು ಸಾಗಲಿ .. ನೀ ನನ್ನ ಜೊತೆ ನೆಡಿಯಬೇಕಿದೆ…. ಮೋಸದ ಕಣಿವೆ ಇದ್ದಾಗೆ ಈ ಜಗ ಜಗ ಮಾತ್ರವಲ್ಲವೆ ಹುಡುಗಿ ಅದರಲ್ಲಿರುವ ಕೆಲ ಜನರು ಕೂಡ ಸುಳ್ಳರೆ ಉರಿಯುತ್ತಿದೆ ಚಿತೆಗಳು ಎಲ್ಲ ಮುಲೆಯಲು ಪ್ರತಿ ನಡೆ-ನುಡಿ ವಿನಾಶದತ್ತ ಸಾಗಿದೆ ಕರ್ತವ್ಯ-ಬದುಕು ಕಾಲಕಾಲಕ್ಕೆ ಬದಲಾಗುತ್ತಿದೆ ಇದೆಲ್ಲದರ ಮದ್ಯ ನೀ ಸಾಗಬೇಕು ಗಮನವಿರಲಿ ನಿನ್ನ ಹೆಜ್ಜೆಯತ್ತ ನೀ ನನ್ನ [...]
ಕಾದಿದ್ದೆ ನಾ ನಿನ್ನೊಳಗಿನ ಧ್ವನಿಯ ಝೇಂಕಾರ ನಾ ಆಗುವೆನೆಂದು.. ಅರಸಿತ್ತು ಮನ ನಿನ್ನೊಳಗಿನ ಹೃದಯ ಸಿಂಹಾಸನದ ಅರಸಿ ನಾ ಆಗುವೆನೆದು.. ಬಯಸಿತ್ತು ಚಿತ್ತ ನಿನ್ನೊಳಗಿನ ಚಿತ್ತಾರ ಲೋಕದ ಚುಕ್ಕೆ ನಾ ಆಗುವೆನೆಂದು … ಕನವರಿಸಿತ್ತು ಮನಸ್ಸು ನಿನ್ನೊಳಗಿನ ಕವಿಯ ಸಾಹಿತ್ಯದ ಕಾವ್ಯ ನಾ ಆಗುವೆನೆಂದು… ಕೊನೆಗೂ ಆಗಲಿಲ್ಲ ನಾ ಅಗುವೆನೆಂದ ನಿನ್ನೊಳಗಿನ ನಾನು.. ನನ್ನೊಳಗಿನ ನೀನು.. ಬದುಕ ಪಥದಲಿ ನಿನ್ನೊಳಗೆ ನಾ ಮೌನಿಯದೆ ನನ್ನೊಳಗೆ ನಿ ಸ್ವಪ್ನವಾದೆ ……..
ಗೆಳೆಯಾ ನೀನಂದು ಮಾಡಿದೆ ನನ್ನೆದೆಗೆ ಪ್ರೀತಿಯ ಸಿಂಚನ ಆ ಕ್ಷಣ ರೋಮಾಂಚನ ಸಂತಸ ಎಲ್ಲೇ ಮೀರಿ ಮಾತುಗಳು ತಳೆದಯು ಮೌನ ನಮ್ಮಿಬ್ಬರ ಹೃದಯಗಳ ಮಧುರ ಮಿಲನ ಮನಸ್ಸುಗಳ ಭಾವ ಬಂಧನ ಹೇಗೆ ಮರೆಯಲಿ ಹೇಳು ನನ್ನ ಪಾಲಿನ ಆ ಸುದಿನ ಅದರ ಸವಿ ನೆನಪಿಗಾಗಿಯೇ ನನ್ನೀ ಅಂತರಂಗದ ಕವನ .