ನನ್ನ ಪ್ರತಿ ಬೆಳಗೂ..
0

ಪ್ರತಿ ಬೆಳಗು
ಹೊಸ ಆಸೆಯಿಂದ ಹೇಳುತ್ತೇನೆ
ಆ ಹಕ್ಕಿಯಷ್ಟೇ ನಯವಾಗಿ ,
ಹೂತಿಟ್ಟ ಕನಸಿಗೆ ಒಂದು ಜೊತೆ ಹೆಜ್ಜೆಕಟ್ಟಿ
ಕುಣಿಯುತ್ತೇನೆ ಮೈ ತಣಿಯುವಂತೆ
ನೀಲ ಸಾಗರದುದ್ದ ನೀಳಾ ರೆಕ್ಕೆಗಳ ಚಾಚಿ ….
ನಗುವ ಕಣ್ಣುಗಳಲ್ಲಿ ಕನಸುಗಳನ್ನೋತ್ತಿ
ಹಣೆ ಮೇಲಿನ ಗುರುತನ್ನು ಲೆಕ್ಕಿಸದೆ
ನೆನೆಯುತ್ತೇನೆ ಹನಿಮಳೆಯ ಲಾಸ್ಯದಲಿ ……
ನನ್ನ ಏಕಾಂತದೊಳು ನನಗರಿಯದೆ ಕಾಡುವ
ಪ್ರೀತಿಯ ಹಂಗನು ಹುಡುಕುತ್ತೇನೆ
ಸ್ವಂಥವಲ್ಲದ ಯಾರದೋ ಹೃದಯದಲಿ …..
ನೆನ್ನೆಗಳ ಬಯಕೆಗಳು ಗರಿಕೆದರದಾದರೆ
ನಾಳೆಗಳು ಬರಿದಾಗುವ ಮುನ್ನ
ಬದಲಿಸುತ್ತೇನೆ ಋತುಗಳನು ನಾ ಅರಳಲು …
ಮತ್ತದೇ ಗಮ್ಯದ ಬೆಳಗು
ಚಲವೆಂಬ ಪಕ್ಷಿ ತಿಳಿಮನದಿ ಹಾಡುತಿರಲು
ಜೀವನ ಒಂದು ಮಧುವನವಾಗಿ ಬರಲು
ಕಾಯುತ್ತೇನೆ ಕಾಲವೆಂಬ ಉತ್ತರಕ್ಕಾಗಿ ……
ನಗುವಾಗಲೆಲ್ಲಾ ಜಗತ್ತು ಎಷ್ಟು ಸುಂದರ ಎನಿಸುತ್ತದೆ. ಸದ್ಯಕ್ಕಂತೂ ನಾನು ನಗುನಗುತ್ತಾ ಇದ್ದೇನೆ. ಇರುವಷ್ಟು ದಿನ ಹೀಗೇ ನಗುನಗುತ್ತಲೇ ಇರಬೇಕೆಂದುಕೊಂಡಿದ್ದೇನೆ. ಮುಂದೆ ಹೇಗೋ ಏನೋ ಗೊತ್ತಿಲ್ಲ. ಅದರ ಬಗ್ಗೆ ಆಸಕ್ತಿಯೂ ಇಲ್ಲ. ಇನ್ನಾವ ಚಿಂತೆಯೂ ಸದ್ಯಕ್ಕೆ ನನಗಿಲ್ಲ.:)